GNOME ಕ್ಯಾಲ್ಕುಲೇಟರ್

ಗಣಿತ, ವೈಜ್ಞಾನಿಕ ಅಥವಾ ಹಣಕಾಸಿನ ಲೆಕ್ಕಚಾರಗಳನ್ನು ಮಾಡಿ

GNOME ಕ್ಯಾಲ್ಕುಲೇಟರ್‌ ಎನ್ನುವುದು ಗಣಿತೀಯ ಸಮೀಕರಣಗಳನ್ನು ಬಿಡಿಸುವ ಒಂದು ಅನ್ವಯವಾಗಿದೆ. ಮೇಲು ನೋಟಕ್ಕೆ ಇದು ಕೇವಲ ಮೂಲಭೂತ ಗಣಿತೀಯ ಕಾರ್ಯಾಚರಣೆಗಳನ್ನು ನಿರ್ವಹಿಸುವ ಒಂದು ಸರಳವಾದ ಕ್ಯಾಲ್ಕುಲೇಟರ್‌ ಆಗಿ ಕಾಣಿಸಿದರೂ ಸಹ, ಆಶ್ಚರ್ಯಕರ ರೀತಿಯ ಸಾಮರ್ಥ್ಯಗಳನ್ನು ನೋಡಲು ನೀವು ಮುಂದುವರೆದ (ಸುಧಾರಿತ), ಹಣಕಾಸು, ಅಥವ ಪ್ರೊಗ್ರಾಮಿಂಗ್ ಕ್ರಮಕ್ಕೆ ಬದಲಾಯಿಸಬಹುದು.

ಮುಂದುವರೆದ ಕ್ಯಾಲ್ಕುಲೇಟರ್‌ ಹಲವಾರು ಕಾರ್ಯಾಚರಣೆಗಳನ್ನು ಬೆಂಬಲಿಸುತ್ತದೆ: ಲಾಗರಿತಮ್‌ಗಳು, ಅಪವರ್ತ್ಯಗಳು, ಟ್ರಿಗೋನಮೆಟ್ರಿಕ್‌ ಮತ್ತು ಹೈಪರ್ಬೋಲಿಕ್ ಕಾರ್ಯಭಾರಗಳು, ಮಾಡ್ಯುಲಸ್‌ ವಿಭಜನೆ, ಸಂಕೀರ್ಣ ಸಂಖ್ಯೆಗಳು, ಯಾದೃಚ್ಛಿಕ ಸಂಖ್ಯೆಯ ಉತ್ಪಾದನೆ, ಪ್ರೈಮ್ ಫ್ಯಾಕ್ಟರೈಸೇಶನ್ ಮತ್ತು ಏಕಮಾನದ ರೂಪಾಂತರಗಳನ್ನು ಬೆಂಬಲಿಸುತ್ತದೆ.

ಹಣಕಾಸು ಕ್ರಮವು ನಿಗಧಿತ ಅವಧಿ ಬಡ್ಡಿದರ, ಪ್ರಸಕ್ತ ಮತ್ತು ಭವಿಷ್ಯದ ಮೌಲ್ಯ, ಜೋಡಿ ಇಳಿಕೆ (ಡಿಕ್ಲೈನಿಂಗ್) ಮತ್ತು ಸರಳ ರೇಖೆಯ ಸವಕಳಿ, ಮತ್ತು ಇತರವುಗಳೊಂದಿಗೆ ಇನ್ನೂ ಹಲವಾರು ಕಂಪ್ಯೂಟೇಶನ್‌ಗಳನ್ನು ಬೆಂಬಲಿಸುತ್ತದೆ.

ಪ್ರೊಗ್ರಾಮಿಂಗ್‌ ಕ್ರಮವು (ಬೈನರಿ, ಆಕ್ಟಲ್‌, ಡೆಸಿಮಲ್ ಮತ್ತು ಹೆಕ್ಸಾಡೆಸಿಮಲ್‌), ಬೂಲಿಯನ್‌ ಆಲ್ಜಿಬ್ರಾ, ಒಂದರ ಮತ್ತು ಎರಡರ ಕಾಂಪ್ಲಿಮೆಂಟೇಶನ್‌, ಕ್ಯಾರೆಕ್ಟರ್‌ನಿಂದ ಕ್ಯಾರೆಕ್ಟರ್‌ಗೆ ಕೋಡ್ ಪರಿವರ್ತನೆ, ಮತ್ತು ಇನ್ನಷ್ಟು ಸಾಮಾನ್ಯ ಮೂಲಗಳ ನಡುವಿನ ರೂಪಾಂತರವನ್ನು ಬೆಂಬಲಿಸುತ್ತದೆ.

Get involved

Explore the interface

Get to know us

More Information

Learn more

Visit the online help page for this app.

Project homepage

Visit the dedicated homepage for this project.

Newest Release

Latest version 40.1 released on ಏಪ್ರಿಲ್ 30, 2021.

Partially translated

Some parts of this app are available in your language.